Oct 12, 2021

Amma you are great

 ಅಮ್ಮಂದಿರ ಪ್ರಸವ ವೇದನೆ ಅಸದಳ!


14 ವರ್ಷಗಳ ನಂತರ ಮೊದಲ ಮಗು ಹುಟ್ಟಿತು, ಆದರೆ ತಾಯಿ ಈ ಜಗತ್ತನ್ನು ತೊರೆದಳು, ಡಾಕ್ಟರಿಗೆ ತನ್ನ ಭಾವನೆಗಳನ್ನು ತಡೆದುಕೊಳ್ಳಲಾಗಲಿಲ್ಲ.


ಈ ಡಾಕ್ಟರ್ ಈ ಕೆಳಗಿನ ಚಿತ್ರವನ್ನು ಪ್ರಕಟಿಸಿದರು ಮತ್ತು ಬಿಕ್ಕಿ ಬಿಕ್ಕಿ ಅತ್ತರು ಮತ್ತು ಬರೆದರು:


ನನ್ನ ಬದುಕಿನಲ್ಲಿ ತೀರ ದುಃಖದ ದಿನ. ಒಬ್ಬ ಡಾಕ್ಟರಾಗಿ, ನಾನು ಹಲವಾರು ಗರ್ಭಿಣಿ ಮಹಿಳೆಯರನ್ನು ಆರೈಕೆಮಾಡಿದ್ದೇನೆ ಮತ್ತು ನಾನು ಪ್ರಸವ ಕೋಣೆಯಲ್ಲಿರುವಾಗ, ಎಲ್ಲಾ ಅಮ್ಮಂದಿರನ್ನು ಕಾಪಾಡಲು ಮತ್ತು ಆಶೀರ್ವದಿಸಲು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಮ್ಮಂದಿರ ಪ್ರಸವ ವೇದನೆ ಸಹಿಸಲಸಾಧ್ಯವಾದುದು ಮತ್ತು ಅದು ಕೇವಲ ಒಂಭತ್ತು ತಿಂಗಳ ಕಾಲ ಮಗುವನ್ನು ಹೊರುವುದಷ್ಟೇ ಅಲ್ಲ, ಹೊಸ ಜೀವವೊಂದನ್ನು ಜಗತ್ತಿಗೆ ತರುವುದೂ ಆಗಿದೆ. 


ನಾವು ಇವತ್ತು ಬಿಕ್ಕಿ ಬಿಕ್ಕಿ ಅತ್ತೆವು, ಒಬ್ಬ ಮಹಿಳೆಯನ್ನು ಕಳೆದುಕೊಂಡೆವು, ದೇವರನ್ನು ಕರೆದು ಇದನ್ನು ಹೇಳಲು ಬಯಸುವುದಿಲ್ಲ, ಆದರೆ ಮಹಿಳೆಯರನ್ನು ಇಂತಹ ಸ್ಥಿತಿಗೆ ತಳ್ಳುವ ಮನಸ್ಸಾದರೂ ಏಕೆ ಎಂದು ಕೇಳಲು ಇಚ್ಛಿಸುತ್ತೇವೆ. 14 ವರ್ಷಗಳ ಕಾಲ ಅವಳು ಬಸಿರಾಗುವುದನ್ನು ತಡೆಯಲಾಯಿತು, ತಾಯ್ತನವನ್ನು ವಂಚಿಸಲಾಯಿತು. ನಾವು ಇಂಜೆಕ್ಷನ್ನುಗಳು ಹಾಗೂ ಕೃತಕ ಗರ್ಭಧಾರಣೆಯಂತಹ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಮಾಡಿದೆವು. ಅವಳ ಗರ್ಭಕೋಶದಲ್ಲಿ ಗರ್ಭಚೀಲದ ಜತೆ ಒಂದು ದೊಡ್ಡ ಗಡ್ಡೆ ಇತ್ತು. ಅದರ ಹೊರತಾಗಿಯೂ,ಅಂತಿಮವಾಗಿ, ದೇವರ ಕೃಪೆಯಿಂದಾಗಿ, ಔಷಧ ಹಾಗೂ ವಿಜ್ಞಾನದ ಎಲ್ಲಾ ನಿಯಮಗಳನ್ನೂ ಅವಳು ಭರಿಸಿದಳು. ಅವಳು ಗರ್ಭ ಧರಿಸಿದಾಗ ಆ ಗಡ್ಡೆ ನಿಧಾನವಾಗಿ ಕರಗತೊಡಗಿತು, ಎಲ್ಲವೂ ಸುಲಲಿತವಾಯಿತು.


ಪ್ರಸವದ ಸಮಯದಲ್ಲಿ ಅವಳ ಗಂಡ ನನ್ನ ಬಳಿ ಧಾವಿಸಿ ಬಂದ ಮತ್ತು ನಾನು ನನ್ನ ಎಲ್ಲಾ ಕೆಲಸಗಳನ್ನೂ ಬದಿಗೊತ್ತಿ ಪ್ರಸವ ಕೋಣೆಯಲ್ಲಿ ಏಳು ಗಂಟೆಗಳ ಕಾಲ ಇದ್ದೆ. ಅವಳ ಹೊಟ್ಟೆಯನ್ನು ಕತ್ತರಿಸಬೇಕಾಯಿತು, ಅವಳಿಗೆ ಮಗು ಹುಟ್ಟಿತು, ತನ್ನ ಮಡಿಲಿಗೆ ಹಾಕಿಕೊಂಡು ಮಂದಹಾಸ ಬೀರಿದಳು, ತಕ್ಷಣವೇ ಕಣ್ಣು ಮುಚ್ಚಿದಳು. ಮಗು ಉಳಿಯಿತು ತಾಯಿ ಅಸು ನೀಗಿದಳು. ತನ್ನ ಹೆಂಡತಿಯ ಸಾವಿನ ಸುದ್ದಿ ತಿಳಿದ ಗಂಡ ಮೂರ್ಛೆಹೋದ.


ಇಂತಹ ಸುದಿನ ಎಂತಹ ದುರಂತ ಕತೆಯಾಗಿಹೋಯಿತು?


ದಯವಿಟ್ಟು ಮಹಿಳೆಯರನ್ನು ಗೌರವಿಸಿ, ಏಕೆಂದರೆ ಅವರು ಒಂಭತ್ತು ತಿಂಗಳ ಕಾಲ ನಡೆಯುವ ಹೊಸ ಜೀವವೊಂದನ್ನು ಜಗತ್ತಿಗೆ ನೀಡುವ ಪ್ರಕ್ರಿಯೆಯಲ್ಲಿ, ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಾರೆ, ಪ್ರಸವದ ಯಾತನೆಯನ್ನು ಅನುಭವಿಸುತ್ತಾರೆ, ತಮ್ಮ ಮಕ್ಕಳನ್ನು ಪೊರೆಯಲು ಹಗಲೂ ಇರುಳೂ ತಮ್ಮ ಜೀವ ಸವೆಸುತ್ತಾರೆ. ಅದೊಂದು ಮಹಾನ್ ತ್ಯಾಗದ ಕಾರ್ಯ!


ನೀವು ನಿಮ್ಮ ಅಮ್ಮನ ಬಳಿ ಮಾತಾಡುತ್ತಿಲ್ಲವಾದರೆ ಈಗಲೇ ಹೋಗಿ ಕುಳಿತು ಅವಳ ಕಷ್ಟಸುಖ ವಿಚಾರಿಸಿ. ನಿಮ್ಮ ಪ್ರೀತಿಯನ್ನು ಧಾರೆಯೆರೆಯಿರಿ, ಅವರನ್ನು ಗೌರವಿಸಿ.

No comments:

Post a Comment